In association with

ಇನ್ನಷ್ಟು ತಿಳಿದುಕೊಳ್ಳಲು
ಕರೆ ಮಾಡಿ: 080 - 69043800

ಆರೋಗ್ಯ ಮತ್ತು ಸಂತೋಷಕ್ಕಾಗಿ ಯೋಗವನ್ನು ಆಚರಿಸಲು 500 ಯೋಗ ಗುರುಗಳು ಮತ್ತು ವಿದ್ಯಾರ್ಥಿಗಳು 1 ಕ್ರೀಡಾಂಗಣದಲ್ಲಿ ಒಂದಾಗುತ್ತಾರೆ. ಈ ಭಾನುವಾರ, 17 ಜುಲೈ 2022 ರಂದು ಬೆಳಿಗ್ಗೆ 7:30 ರಿಂದ 8:30 ರವರೆಗೆ, ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ. ಒಗ್ಗೂಡಿ ಏಕತೆಗೆ ಸಾಕ್ಷಿಯಾಗೋಣ!

ಗಿನ್ನೆಸ್ ವಿಶ್ವ ದಾಖಲೆ

ಬೃಹತ್ ಯೋಗ ಪಾಠ (ಏಕ ಸ್ಥಳ)

ಭಾರತಕ್ಕೆ ಸ್ವಾತಂತ್ರ್ಯ ಬಂದು 75ನೇ ವಾರ್ಷಿಕೋತ್ಸವ ಸಂಭ್ರಮದ (ಆಜಾದಿ ಕಾ ಅಮೃತ ಮಹೋತ್ಸವ) ಸಂದರ್ಭದಲ್ಲಿ ಅದರ ಸವಿನೆನಪಿಗಾಗಿ, ಯೋಗದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಲು ಮುಂದಾಗಲಾಗಿದೆ. ಇದಕ್ಕಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳ 10 ಲಕ್ಷಕ್ಕೂ ಹೆಚ್ಚು ಯುವಕರು ಪಾಲ್ಗೊಳ್ಳಲಿದ್ದು, ಜನವರಿ 15th 2023 ರಂದು ಯೋಗದ ವಿವಿ ಭಂಗಿಗಳನ್ನು ಪ್ರದರ್ಶಿಸಲಿದ್ದಾರೆ. 

2017ರಲ್ಲಿ ಮೈಸೂರಿನಲ್ಲಿ ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಮಂದಿ ಯೋಗ ಪ್ರಸ್ತುತಿ ನಿರ್ವಹಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ಸ್ಥಾಪಿಸಲಾಗಿತ್ತು. ಈ ದಾಖಲೆ ನಿರ್ಮಾಣ ಮಾಡಲು 55,506 ಜನರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. 2018ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು, ರಾಜಸ್ಥಾನದ ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾದ ಕೋಟಾ ನಗರವು “ಯೋಗ ನಗರ”ವಾಗಿ ರೂಪಾಂತರಗೊಂಡಿತು. ಏಕೆಂದರೆ ಒಂದು ಲಕ್ಷಕ್ಕೂ ಹೆಚ್ಚು ಜನರು ಅಲ್ಲಿ ಏಕಕಾಲದಲ್ಲಿ ಯೋಗವನ್ನು ಪ್ರದರ್ಶಿಸುವ ಮೂಲಕ ಹೊಸ ಗಿನ್ನಿಸ್ ವಿಶ್ವದಾಖಲೆಯನ್ನು ಸ್ಥಾಪಿಸಿದ್ದರು. 

ಇದೇ ರೀತಿ, ಕರ್ನಾಟಕ ಸರ್ಕಾರವು ಜನವರಿ 15th 2023 ರಂದು ಯೋಗ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಮೂಲಕ ಯುವ ಜನತೆಯ ಶಕ್ತಿಯನ್ನು ಬಳಸಿಕೊಳ್ಳುವ ಪ್ರಯತ್ನ ಇದಾಗಿದ್ದು, ಯೋಗಾಸನದಲ್ಲಿ ಗಿನ್ನಿಸ್ ವಿಶ್ವದಾಖಲೆ ನಿರ್ಮಾಣ ಮಾಡುವ ಸಲುವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಯುವಕರು ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನಾಗಿ ಮಾಡಿಕೊಳ್ಳಲಾಗಿದ್ದು, 12 ಪ್ರಾದೇಶಿಕ ಸ್ಥಳಗಳು ಮತ್ತು ಕೇಂದ್ರಗಳಾಗಿ ರೂಪುಗೊಳ್ಳಲಿವೆ. ಅಲ್ಲದೆ, ಈ ಬೃಹತ್ ಕಾರ್ಯಕ್ರಮದೊಂದಿಗೆ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಎನ್ಎಸ್ಎಸ್ ಮೂಲಕ 1 ಕೋಟಿ ಯುವಕರನ್ನು ಸೆಳೆಯಲಾಗುತ್ತಿದೆ. ಯೋಗಾಸನದ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣ ಮಾಡುವುದರ ಜತೆ ಜತೆಗೆ ಯುವಕರಿಗೆ ಯೋಗಾಭ್ಯಾಸ ಮಾಡಲು ಪ್ರೇರೇಪಿಸುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೆ, ನಿಯಮಿತ ಯೋಗಾಭ್ಯಾಸದಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುವುದು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಆರೋಗ್ಯದ ಭರವಸೆ ಸಿಗಲಿದೆ. ಜೊತೆಗೆ ಯೋಗ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಸಂತೋಷಕರ ಜೀವನವನ್ನು ನಡೆಸಲು ಅವರಿಗೆ ಸಹಾಯ ಮಾಡಲಾಗುವುದು.

ಬೃಹತ್ ಯೋಗ ಪಾಠ (ಏಕ ಸ್ಥಳ)

ಅನುಸರಿಸಬೇಕಾದ ಮಾರ್ಗಸೂಚಿಗಳು:

ಬೃಹತ್ ಯೋಗ ಪಾಠದಲ್ಲಿ ಭಾಗವಹಿಸುವವರು ಸಾಮಾನ್ಯ ವರ್ಗದ ರಚನೆಯನ್ನು ಅನುಸರಿಸಬೇಕು. 

ಬೋಧಕ/ಬೋಧಕರು ಮತ್ತು ಪ್ರದರ್ಶನ ಮಾಡಿವ ವಿದ್ಯಾರ್ಥಿಗಳು ಒಂದೇ ಮಾದರಿಯಲ್ಲಿ ಯೋಗಾಸನವನ್ನು ಮಾಡಬೇಕು. ಸ್ವಲ್ಪವೂ ಶಿಸ್ತು ತಪ್ಪುವ ಹಾಗಿಲ್ಲ. ಒಬ್ಬ ಹೊರಗೆ ಬಿದ್ದರೂ ಅವುಗಳನ್ನು ಪರಿಗಣಿಸಲಾಗುವುದಿಲ್ಲ. 

ಪ್ರತಿ ಸ್ಥಳದಲ್ಲಿ, ಸಂಘಟಕರು ಸೇರಿದಂತೆ ಒಬ್ಬರು ಬೋಧಕರನ್ನು ಇಲ್ಲವೇ ವಿವಿಧ ಜನರ ಗುಂಪುಗಳನ್ನು ಮುನ್ನಡೆಸಲು ಬೋಧಕರ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ಬೋಧಕರು ಸಾಕ್ಷಿಗಳಾಗಿರಲು ಸಾಧ್ಯವಿಲ್ಲ.  ಆದರೆ, ಅಂತಿಮವಾಗಿ ಎಣಿಕೆಗೆ ಅರ್ಹರಾಗಿರುತ್ತಾರೆ. ಬೋಧಕರು ಸೂಕ್ತ ಅರ್ಹತೆಯನ್ನು ಹೊಂದಿರಬೇಕು.

ಎಲ್ಲ ಸ್ಪರ್ಧಿಗಳಿಗೆ ಏಕಕಾಲದಲ್ಲಿ ಒಂದೇ ವಿಷಯವನ್ನು ಕಲಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಸ್ಪರ್ಧಿಗಳು ಬೋಧಕ/ಬೋಧಕರನ್ನು ನೋಡಲು ಇಲ್ಲವೇ ವೀಡಿಯೊ ಪರದೆ ಮೂಲಕ ಕಂಡುಕೊಂಡು ಅವರ ಚಲನೆಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ.

ಯೋಜಿತ ಸ್ಪರ್ಧಿಗಳ ಸಂಖ್ಯೆಯು 5,000 ಮತ್ತು/ಅಥವಾ 15 ಇಲ್ಲವೇ ಅದಕ್ಕಿಂತ ಹೆಚ್ಚಿನ ಸ್ಥಳಗಳನ್ನು ಮೀರುವಂತೆ ನಿಗದಿಪಡಿಸಿದಲ್ಲಿ ಮೂರನೇ ಸಂಸ್ಥೆಯು ಮತ ಎಣಿಕೆಯ ಪ್ರಕ್ರಿಯೆಯ ಎಲ್ಲ ಆಯಾಮಗಳನ್ನು ನಿರ್ವಹಿಸಬೇಕು.

ಮೂರನೇ ಇಲ್ಲವೇ ಸ್ವತಂತ್ರ ಸಂಘಟನೆಯು ಈ ಮುಂಚೆ ಇಂತಹ ಬೃಹತ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯ ಜನರನ್ನು ಎಣಿಸುವ ಪೂರ್ವ ಅನುಭವವನ್ನು ಹೊಂದಿರಬೇಕು. ಈ ಅನುಭವವನ್ನು ಹೊಂದಿರುವ ಯಾವುದೇ ಸಂಸ್ಥೆಯನ್ನು ಬಳಸಿಕೊಳ್ಳಬಹುದು. ಆದಾಗ್ಯೂ, ಅವರ ಅನುಭವ ಮತ್ತು ಸೂಕ್ತತೆಯ ವಿವರಗಳನ್ನು ಪುರಾವೆಗಳೊಂದಿಗೆ ನಮೂದು ಮಾಡಬೇಕು.

ಈ ಪ್ರಯತ್ನದಲ್ಲಿ 5,000ಕ್ಕಿಂತ ಕಡಿಮೆ ಸ್ಪರ್ಧಿಗಳು ಮತ್ತು /ಅಥವಾ 15 ಸ್ಥಳಗಳಲ್ಲಿ ಕನಿಷ್ಠ ಇಬ್ಬರು ಸ್ವತಂತ್ರ ಸಾಕ್ಷಿದಾರರು ಮೇಲ್ವಿಚಾರಣೆ ಮತ್ತು ಪರಿಶೀಲನೆಯನ್ನು ನಡೆಸಬೇಕು.

ಕಾರ್ಯಕ್ರಮ ಸಂಘಟಕರಿಂದ ಮೇಲ್ವಿಚಾರಕರ ಮೂಲಗಳಿಂದ ಆಯ್ಕೆಯಾಗಿರಬೇಕು. ಅಲ್ಲದೆ, ಆ ಸಂಘಟನೆಯಿಂದ ಸ್ವತಂತ್ರರಾಗಿರಬೇಕು. 

ಪ್ರತಿಯೊಬ್ಬ ಮೇಲ್ವಿಚಾರಕನಿಗೆ ಯೋಗಾಭ್ಯಾಸದ ಸಮಯದಲ್ಲಿ ಅವಲೋಕನಕ್ಕಾಗಿ ಸ್ಪರ್ಧಿಗಳ ಒಂದು ನಿರ್ದಿಷ್ಟ ಗುಂಪನ್ನು ನಿಯೋಜಿಸಬೇಕು. ಸ್ಪಷ್ಟವಾಗಿ ವಿವರಿಸಿದ ಪ್ರದೇಶಗಳಲ್ಲಿ ಸ್ಪರ್ಧಿಗಳನ್ನು ಇರಿಸಬೇಕು. ಇದನ್ನು ಬಣ್ಣಬಣ್ಣದ ಬಟ್ಟೆ, ಗುರುತು ಮಾಡಿದ ಪ್ರದೇಶ ಅಥವಾ ಇನ್ನಾವುದೇ ವಿಧಾನವನ್ನು ಬಳಸಿ ಮಾಡಬಹುದು.

ಪ್ರತಿ 50 ಸ್ಪರ್ಧಿಗಳಿಗೆ ಮೇಲಿನ ನಿರ್ದಿಷ್ಟ ಮಾರ್ಗಸೂಚಿಗಳಲ್ಲಿ ಬೇರೆ ರೀತಿಯಲ್ಲಿ ತಿಳಿಸದ ಹೊರತು, ಒಬ್ಬ ನಿಯೋಜಿತ ಮೇಲ್ವಿಚಾರಕ ಇರಬೇಕು.

ಈ ದಾಖಲೆ ಪ್ರಯತ್ನವು 0.01 ಸೆಕೆಂಡುಗಳ ವ್ಯತ್ಯಾಸದೊಂದಿಗೆ ಪ್ರತಿ ಸ್ಥಳದಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಿ ಮುಕ್ತಾಯಗೊಳ್ಳುವುದು ಬಹಳ ಮುಖ್ಯವಾಗಿದೆ.

ಕಾರ್ಯಕ್ರಮದ ದಿನದಂದು ಯೋಗ ಪಾಠ ಮತ್ತು ಅಭ್ಯಾಸ

ಯೋಗಾಭ್ಯಾಸ ತರಗತಿಯ ಲಿಂಕ್ ಅನ್ನು ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದ್ದು, ಲಿಂಕ್ ಹೀಗಿದೆ: www.yogathon2022.com [ಅಥವಾ ಇದಕ್ಕಾಗಿ ನೀವು YouTube ನಲ್ಲಿಯೂ ಸಹ ಇದೇ ಲಿಂಕ್ ಅನ್ನು ಬಳಸಿ ವೀಕ್ಷಿಸಬಹುದು- __

ರಾಜ್ಯಾದ್ಯಂತ ಎಲ್ಲ ಸ್ಪರ್ಧಿಗಳು ಒಂದೇ ಮಾದರಿಯ ಆಸನವನ್ನು ಅಭ್ಯಾಸ ಮಾಡಬೇಕೆಂದು ವಿನಂತಿಸಲಾಗಿದೆ.

ಯಾರು ಮೇಲ್ವಿಚಾರಕ?

ಒಬ್ಬ ಮೇಲ್ವಿಚಾರಕನು ಹಂಚಿಕೆ ಮಾಡಲಾದ ಸ್ಪರ್ಧಿಗಳ ಗುಂಪನ್ನು ಗಮನಿಸಬೇಕಾದ ಒಬ್ಬ ವ್ಯಕ್ತಿಯಾಗಿದ್ದು, ಮಾರ್ಗದರ್ಶಿ ಸೂತ್ರಗಳಲ್ಲಿ ವಿವರಿಸಿದಂತೆ ಯೋಗಾಭ್ಯಾಸದ ಪ್ರಯತ್ನದಲ್ಲಿ ನಿರತರಾದವರು ಪ್ರದೇಶವನ್ನು ತೊರೆಯುವ ಅಥವಾ ದಾಖಲೆಯ ಕ್ರಿಯೆಯನ್ನು ಮಾಡದೇ ಇದ್ದಲ್ಲಿ ಅನರ್ಹಗೊಳಿಸುತ್ತಾರೆ. ಅವರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆ.

ಮೇಲ್ವಿಚಾರಕನ ಕರ್ತವ್ಯಗಳು

  1. ಪ್ರತಿಯೊಬ್ಬ ಮೇಲ್ವಿಚಾರಕನು ಕೇವಲ 50 ಸ್ಪರ್ಧಿಗಳನ್ನು ಮಾತ್ರ ಗಮನಿಸುವುದರ ಜೊತೆಗೆ ನಿರ್ವಹಿಸುತ್ತಾನೆ. ಅವರೆಲ್ಲರೂ ಯೋಗ ತರಗತಿಯ ಸಮಯದಲ್ಲಿ ದಾಖಲೆಯ ಪ್ರಯತ್ನದಲ್ಲಿ ಸಂಪೂರ್ಣವಾಗಿ ಭಾಗವಹಿಸಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಾರೆ.
  2. ದಾಖಲು ಚಟುವಟಿಕೆಯಲ್ಲಿ ಮೇಲ್ವಿಚಾರಕರು ಭಾಗವಹಿಸುವುದಿಲ್ಲ ಅಥವಾ ಅದನ್ನು ಪೂರೈಸಲು ಸ್ಪರ್ಧಿಗಳಿಗೆ ಸಹಾಯವನ್ನೂ ಮಾಡುವುದಿಲ್ಲ.
  3. ಮೇಲಿನ ನಿರ್ದಿಷ್ಟ ಮಾರ್ಗಸೂಚಿಗಳಲ್ಲಿ ವಿವರಿಸಿದಂತೆ ಸಂಪೂರ್ಣವಾಗಿ ಭಾಗವಹಿಸದ ಅಥವಾ ಪ್ರಯತ್ನವು ಅಧಿಕೃತವಾಗಿ ಪೂರ್ಣಗೊಳ್ಳುವ ಮೊದಲು ನಿಗದಿತ ಸ್ಥಳದಲ್ಲಿ ಅಭ್ಯಾಸ ಮಾಡುವ ಪ್ರದೇಶವನ್ನು ತೊರೆಯುವ ಯಾವುದೇ ಸ್ಪರ್ಧಿಯನ್ನು ಅನರ್ಹಗೊಳಿಸುವುದು ಮೇಲ್ವಿಚಾರಕರ ಕಾರ್ಯವಾಗಿದೆ.

ಮೇಲ್ವಿಚಾರಕರಿಗೆ ನಿಯಮಗಳು

  1. ಪ್ರತಿ 50 ಸ್ಪರ್ಧಿಗಳಿಗೆ ಒಬ್ಬ ನಿಯೋಜಿತ ಮೇಲ್ವಿಚಾರಕ ಇರಬೇಕು. 
  2. ದಾಖಲೆ ನಿರ್ಮಾಣ ಮಾಡುವ ಪ್ರಯತ್ನದಲ್ಲಿರುವ ಸಂಸ್ಥೆಯಿಂದ ಮೇಲ್ವಿಚಾರಕರು ನೇಮಕವಾಗಿರಬಾರದು.
  3. ಪ್ರತಿಯೊಬ್ಬ ಮೇಲ್ವಿಚಾರಕನಿಗೆ ಸ್ಪರ್ಧಿಗಳ ಒಂದು ನಿರ್ದಿಷ್ಟ ಗುಂಪನ್ನು ನಿಯೋಜಿಸಬೇಕು. ಅಲ್ಲದೆ, ನಿಯೋಜನೆ ಮಾಡಲಾದ ನಿರ್ದಿಷ್ಟ ಪ್ರದೇಶದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. 
  4. ಬಣ್ಣಬಣ್ಣದ ಬಟ್ಟೆಗಳು, ಸ್ಪಷ್ಟವಾಗಿ ಗುರುತಿಸಲಾದ ಪ್ರದೇಶ ಅಥವಾ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಪೂರ್ವ-ಅನುಮೋದಿತವಾದ ಮತ್ತೊಂದು ವಿಧಾನವನ್ನು ಬಳಸಿಯೂ ಈ ಪ್ರಕ್ರಿಯೆಯನ್ನು ಮಾಡಬಹುದು. (ಎನ್‌ಸಿಸಿ/ಎನ್ಎಸ್ಎಸ್ ಮತ್ತು ಅಂತಹ ಇತರ ಸದಸ್ಯರು ಸೂಕ್ತ ಮೇಲ್ವಿಚಾರಕರಾಗಬಹುದು)
  5. ವಿಶ್ವ ದಾಖಲೆಯ ಪ್ರಯತ್ನದ ಸಮಯದಲ್ಲಿ ಸಂಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಮೇಲ್ವಿಚಾರಕನು ಗರಿಷ್ಠ 50 ಸ್ಪರ್ಧಿಗಳಿರುವ ತಮ್ಮ ಗುಂಪನ್ನು ಮೇಲ್ವಿಚಾರಣೆ ಮಾಡಬೇಕು.
  6. ಪ್ರತಿಯೊಬ್ಬ ಮೇಲ್ವಿಚಾರಕನು ತಮ್ಮ ಗುಂಪಿನಲ್ಲಿರುವ ಯಾರಾದರೂ ಭಾಗವಹಿಸುವ ಪ್ರದೇಶವನ್ನು ಬಿಟ್ಟು ಹೋಗುತ್ತಾರೋ ಅಥವಾ ಯಾವುದೇ ಸ್ಪರ್ಧಿಯು ಪಾನೀಯಕ್ಕಾಗಿ ವಿರಾಮ ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ, ಅದನ್ನು ತಮ್ಮ ಮೇಲ್ವಿಚಾರಣಾ ಹೇಳಿಕೆಯಲ್ಲಿ ಟಿಪ್ಪಣಿ ಮಾಡಿಕೊಳ್ಳಬೇಕು. 
  7. ಸಂಪೂರ್ಣವಾಗಿ ಪ್ರದರ್ಶನ ನೀಡದ ಯಾವುದೇ ಸ್ಪರ್ಧಿಗಳನ್ನು ಮೇಲ್ವಿಚಾರಕನು ಗಮನಿಸಬೇಕು. ಜೊತಗೆ ಭಾಗವಹಿಸದಿದ್ದಕ್ಕಾಗಿ ಅಥವಾ ಹಂಚಿಕೆಯಾದ ಪ್ರದೇಶವನ್ನು ಬಿಟ್ಟುಹೋಗಿದ್ದಕ್ಕಾಗಿ ಅಂತಿಮ ದಾಖಲಾತಿಯಿಂದ ತೆಗೆದುಹಾಕಬೇಕು. 
  8. ಭಾಗವಹಿಸದವರ ಒಟ್ಟು ಸಂಖ್ಯೆಯು ಅಂತಿಮ ಒಟ್ಟು ಮೊತ್ತದ ಶೇ.10 ಅನ್ನು ಮೀರಿದರೆ, ವಿಶ್ವ ದಾಖಲೆ ಪ್ರಯತ್ನವನ್ನು ಅನರ್ಹಗೊಳಿಸಲಾಗುತ್ತದೆ.
  9. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (“ಜಿಡಬ್ಲ್ಯೂಆರ್”) ಒಬ್ಬ ಮೇಲ್ವಿಚಾರಕನು ತನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ನಿರ್ಧರಿಸಿದರೆ, ಅವರ ಇಡೀ ಗುಂಪಿನ ಸ್ಪರ್ಧಿಗಳನ್ನು ಅನರ್ಹಗೊಳಿಸಬಹುದು. ಇದು ಜಿಡಬ್ಲ್ಯೂಆರ್‌ನ ಸ್ವಂತ ವಿವೇಚನೆಗೆ ಬಿಟ್ಟಿದ್ದಾಗಿದೆ.

ದಾಖಲೆಯ ಪ್ರಯತ್ನದಲ್ಲಿ ಸಮಯಪಾಲಕನ ಪಾತ್ರವೇನು?

ದಾಖಲೆಯ ಪ್ರಯತ್ನವು ಯಾವ ಸಮಯದಲ್ಲಿ ಪ್ರಾರಂಭವಾಗಿದೆ ಹಾಗೂ ಯಾವ ಸಮಯದಲ್ಲಿ ಕೊನೆಗೊಂಡಿದೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಪ್ರತಿಯೊಂದು ಸ್ಥಳಕ್ಕೂ ಒಬ್ಬ ಸಮಯಪಾಲಕನನ್ನು ಹೊಂದಿರಬೇಕು.

  1. ದಾಖಲೆ ಪ್ರಯತ್ನದ ಯಾವುದೇ ಸಮಯ-ಸಂಬಂಧಿತ ಅಂಶಗಳನ್ನು ನಿಖರವಾಗಿ ದಾಖಲಿಸಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದು ಸಮಯಪಾಲಕನ ಪಾತ್ರವಾಗಿದೆ. 
  2. ಸಮಯದ ಆಧಾರದ ಮೇಲೆ ಅಥವಾ ಅವಲಂಬಿತವಾದ ಎಲ್ಲ ದಾಖಲೆಗಳಲ್ಲಿ ಈ ಪಾತ್ರವು ನಿರ್ಣಾಯಕವಾಗಿದೆ. ಈ ದಾಖಲೆಯಲ್ಲಿ, ಟೈಮ್ ಕೀಪರ್ ರೆಕಾರ್ಡ್ ಪ್ರಯತ್ನದ ಆರಂಭದ ಬಗ್ಗೆ ಟಿಪ್ಪಣಿ ಮಾಡಬೇಕು. ಏಕೆಂದರೆ ರಾಜ್ಯಾದ್ಯಂತ ಪ್ರತಿಯೊಂದು ಸ್ಥಳದಲ್ಲಿ ಏಕಕಾಲದಲ್ಲಿ ಪ್ರಾರಂಭಿಸುವುದು ಬಹಳ ಮುಖ್ಯವಾಗಿದೆ.
  3. ಈ ದಾಖಲೆಯು ನಿಖರ ಸಮಯಪಾಲನೆ ಮೇಲೆ ಅವಲಂಬಿತವಾಗಿರುತ್ತವೆ. ಅಲ್ಲದೆ, ಇದನ್ನು ಸಾಕ್ಷಿಗಳು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರ ಕೆಲಸವು ಪ್ರಯತ್ನದ ಮೇಲೆಯೇ ಕೇಂದ್ರೀಕರಿಸುವುದಾಗಿದೆ.
  4. ದಾಖಲೆಯು ಅತ್ಯಂತ ವೇಗದ ಸಮಯಕ್ಕಾಗಿದ್ದರೆ, ಆಗ ಪ್ರಯತ್ನವನ್ನು 0.01 ಸೆಕೆಂಡುಗಳಿಗೆ ನಿಖರವಾದ ಸ್ಟಾಪ್ ವಾಚ್‌ಗಳೊಂದಿಗೆ ಎರಡು ಟೈಮ್ ಕೀಪರ್‌ಗಳು ಸಮಯಪಾಲನೆ ಮಾಡಬೇಕು.
  5. ಎರಡು ಕಡೆ ಸಮಯವು ಭಿನ್ನವಾಗಿದ್ದರೆ ಸರಾಸರಿಯನ್ನು ಅಧಿಕೃತ ಸಮಯವೆಂದು ಪರಿಗಣಿಸಬೇಕು.
  6. ಟೈಮ್ ಕೀಪರ್‌ಗಳು ದಾಖಲೆ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಗೆ ಸ್ಪಷ್ಟವಾದ ಆರಂಭ ಮತ್ತು ಮುಕ್ತಾಯದ ಸಂಕೇತವನ್ನು ನೀಡಬೇಕು.

ಪಾತ್ರಗಳು ಮತ್ತು ಜವಾಬ್ದಾರಿಗಳು - ಸಾಕ್ಷಿ

  1. ಪ್ರತಿ ಸ್ಥಳದಲ್ಲಿ 2 ಸಾಕ್ಷಿಗಳು ಇರಬೇಕು
  2. ಈ ಸಾಕ್ಷಿಗಳು ಯೋಗ ಶಿಕ್ಷಕರಾಗಿರಬೇಕು. ಜೊತೆಗೆ ಪೂರ್ವಾನುಮತಿಗಾಗಿ ಅವರ ಅರ್ಹತಾ ಪ್ರಮಾಣಪತ್ರಗಳನ್ನು ಒದಗಿಸಬೇಕು.
  3. ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗಳು ತಿಳಿಸಿರುವ ಎಲ್ಲ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಸಾಕ್ಷಿಗಳಿಗೆ ಸಂಪೂರ್ಣ ಜ್ಞಾನವಿರಬೇಕು.
  4. ಸ್ಪರ್ಧಿಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಇಬ್ಬರೂ ಸಾಕ್ಷಿಗಳು ಸ್ಥಳದಲ್ಲಿ ಹಾಜರಿರಬೇಕು. ಜತೆಗೆ ಗಿನ್ನಿಸ್ ವಿಶ್ವ ದಾಖಲೆಗಳ ನಿರ್ದಿಷ್ಟ ಮಾರ್ಗಸೂಚಿಗಳ ಪ್ರಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.
  5. ಸಾಕ್ಷಿಗಳು ಎಣಿಕೆಯ ವಿಧಾನವನ್ನು ಟಿಪ್ಪಣಿ ಮಾಡಿಕೊಳ್ಳಬೇಕು ಮತ್ತು ಅದನ್ನು ತಮ್ಮ ಸಾಕ್ಷಿ ಹೇಳಿಕೆಯಲ್ಲಿ ನಮೂದಿಸಬೇಕು.  
  6. ಸಾಕ್ಷಿಗಳು ಯಾವುದೇ ಕಾರಣಕ್ಕೂ ವಿಶ್ವ ದಾಖಲೆ ಮಾಡುವ ಪ್ರಯತ್ನದಲ್ಲಿ ಭಾಗಿಯಾಗಿರುವ ಸಂಸ್ಥೆಯಿಂದ ಬರಕೂಡದು. 
  7. ಪ್ರತಿಯೊಬ್ಬ ಸಾಕ್ಷಿಯು ದಾಖಲೆ ನಿರ್ಮಾಣ ಸಂಬಂಧ ಇರುವ ಪ್ರಯತ್ನದ ಸ್ಥಳದ ಸುತ್ತಲೂ ಹೋಗಿ ಈ ಕೆಳಗಿನವುಗಳನ್ನು ಗಮನಿಸಬೇಕು. ಅದನ್ನು ತಮ್ಮ ಸಾಕ್ಷಿ ಹೇಳಿಕೆಯಲ್ಲಿ ಉಲ್ಲೇಖಿಸಬೇಕು.

ಸ್ಥಳದಲ್ಲಿ ಅಂಗೀಕರಿಸಲಾದ ಎಣಿಕೆಯ ಪ್ರಕ್ರಿಯೆ ಯಾವುದು?

  1. ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆಯೇ?
  2. ಪ್ರತಿ 50 ಸ್ಪರ್ಧಿಗಳಿಗೆ ಮೇಲ್ವಿಚಾರಕರು ಇದ್ದಾರೆಯೇ?
  3. ಸ್ಥಳವು ಕಾಂಪೌಂಡ್ ಅಥವಾ ಸ್ಟೇಡಿಯಂ ಗೋಡೆಯಂತಹ ನೈಸರ್ಗಿಕ ಬ್ಯಾರಿಕೇಡ್‌ಗಳನ್ನು ಹೊಂದಿದೆಯೇ?  ಅಥವಾ ಸ್ಥಳವನ್ನು ಬ್ಯಾರಿಕೇಡ್ ಮಾಡಲು ಯಾವ ವಿಧಾನವನ್ನು ಅನುಸರಿಸಲಾಗಿದೆ?
  4. ಭಾಗವಹಿಸುವವರ ಕಾರ್ಯಕ್ಷಮತೆಯನ್ನು ಸಾರ್ವಜನಿಕರು ವೀಕ್ಷಣೆ ಮಾಡಬಹುದೇ?
  5. ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯಿಂದ ಈ ದಾಖಲೆ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತಿದೆಯೇ ಮತ್ತು ದಾಖಲು ಮಾಡಲಾಗುತ್ತಿದೆಯೇ?
  6. ನೀವು ಸ್ಥಳದಲ್ಲಿನ ಒಟ್ಟು ಸ್ಪರ್ಧಿಗಳ ಸಂಖ್ಯೆಯನ್ನು ಹೇಗೆ ಎಣಿಸಿದಿರಿ ಮತ್ತು ವಿಶ್ಲೇಷಿಸಿದಿರಿ?
  1. ಪ್ರತಿಯೊಬ್ಬ ಸಾಕ್ಷಿದಾರನು ಎಲ್ಲ ಮೇಲ್ವಿಚಾರಕ ಹೇಳಿಕೆಗಳನ್ನು ಸಂಗ್ರಹಿಸಬೇಕು ಮತ್ತು ಆ ಸ್ಥಳದಲ್ಲಿ ಭಾಗವಹಿಸಿದವರ ಒಟ್ಟು ಸಂಖ್ಯೆಯನ್ನು ಘೋಷಿಸಬೇಕು. ಅಲ್ಲದೆ, ವಿಶ್ವ ದಾಖಲೆಯ ಪ್ರಯತ್ನದ ನಂತರ ತಕ್ಷಣವೇ ಅದನ್ನು ಬೆಂಗಳೂರಿನ ಕೇಂದ್ರ ಕಛೇರಿಯೊಂದಿಗೆ ಹಂಚಿಕೊಳ್ಳಬೇಕು. 
  2. ಯಾರಾದರೂ ಭಾಗವಹಿಸುವ ಪ್ರದೇಶವನ್ನು ತೊರೆದರೆ ಅದನ್ನು ಸಾಕ್ಷಿದಾರನು ಗಮನಿಸಬೇಕು. ಜೊತೆಗೆ ಅದನ್ನು ಸಾಕ್ಷಿ ಹೇಳಿಕೆಯಲ್ಲಿ ಉಲ್ಲೇಖಿಸಬೇಕು.

ಭಾಗವಹಿಸದಿರುವ ಒಟ್ಟು ಸಂಖ್ಯೆಯು ಅಂತಿಮ ಒಟ್ಟು ಮೊತ್ತದ ಶೇ. 10ಕ್ಕಿಂತ ಹೆಚ್ಚಿದ್ದರೆ ಆ ಪ್ರಯತ್ನವನ್ನು ಅನರ್ಹಗೊಳಿಸಲಾಗುತ್ತದೆ.

ಪೂರ್ವ-ಅನುಮೋದನೆ ಮಾರ್ಗಸೂಚಿಗಳು

ಜಿಡಬ್ಲ್ಯೂಆರ್ ದಾಖಲೆಯ ಪ್ರಯತ್ನದಲ್ಲಿ ಭಾಗವಹಿಸಲು. ಸಂಸ್ಥೆಯ ಅಥವಾ ಸಂಸ್ಥೆಯ ಮುಖ್ಯಸ್ಥರು ಪೂರ್ವ-ಅನುಮೋದನೆಗಾಗಿ ಈ ಕೆಳಗಿನ ವಿವರಗಳನ್ನು ಒದಗಿಸಬೇಕು.

  1. ಭಾಗವಹಿಸುವ ಸಂಸ್ಥೆಯ ಹೆಸರು ಮತ್ತು ವಿವರಗಳು
  2. ಸಂಪರ್ಕ ವಿವರಗಳು
  3. ದಾಖಲೆ ನಿಯೋಜಿತವಾಗಿರುವ ಸ್ಥಳದ ಹೆಸರು
  4. ಮೈದಾನದ ಲೇಔಟ್ ನಕ್ಷೆ (ಉದ್ದ, ಅಗಲ, ಚದರ ಅಡಿಯ ಒಟ್ಟು ವಿಸ್ತೀರ್ಣ, ಪ್ರವೇಶ ಮತ್ತು ನಿರ್ಗಮನ ದ್ವಾರಗಳು)
  5. ಸ್ಪರ್ಧಿಗಳ ಒಟ್ಟು ಸಂಖ್ಯೆ

ಮೂಲಸೌಲಭ್ಯಗಳ ಅವಶ್ಯಕತೆ

ಕಾರ್ಯಕ್ರಮದಲ್ಲಿ ಮೂಲಸೌಕರ್ಯದ ಅಗತ್ಯತೆಗಳು ಪ್ರತಿ ಸ್ಥಳದಲ್ಲಿ ಉದ್ದೇಶಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದ ಎಲ್ಲಾ ಅಂಶಗಳ ವಿವರವಾದ ವಿಮರ್ಶೆಯನ್ನು ಆಧರಿಸಿವೆ.

ಅವಶ್ಯಕತೆಗಳೇನು?

  1. ಗಣ್ಯರಿಗೆ ಮತ್ತು ಮುಖ್ಯ ಪ್ರದರ್ಶನಕಾರರಿಗೆ ವೇದಿಕೆ ನಿರ್ಮಾಣ
  2. ಪ್ರತಿ 500ರಿಂದ 1000 ಸ್ಪರ್ಧಿಗಳಿಗೆ ಸಣ್ಣ ಹಂತಗಳಂತೆ ನಿರ್ಮಾಣ ಮಾಡಿ ಪ್ರತಿ ಹಂತದಲ್ಲಿ 2 ಬೋಧಕರಿಗೆ ಸ್ಥಳಾವಕಾಶ ಕಲ್ಪಿಸಬೇಕು. ಇಲ್ಲವೇ ಸ್ಪರ್ಧಿಗಳು ಅನುಸರಿಸಬೇಕಾದ ಅಭ್ಯಾಸದ ರೆಕಾರ್ಡ್ ಮಾಡುವ ಪ್ರಮಾಣಿತ ವೀಡಿಯೊವನ್ನು ತೋರಿಸಲ್ಪಡುವ ಎಲ್‌ಇಡಿ (LED) ಪರದೆಗಳು
  3. ದಾಖಲೆಗಾಗಿ ಭಾಗವಹಿಸುವ ಪ್ರದೇಶವನ್ನು ಬ್ಯಾರಿಕೇಡ್ ಮಾಡುವುದು
  4. ಭಾಗವಹಿಸುವ ಪ್ರದೇಶದಲ್ಲಿ ಪೂರ್ತಿಯಾಗಿ ಕಾರ್ಪೆಟ್‌ ಹಾಕುವುದು.
  5. ಪ್ರತಿಯೊಬ್ಬ ಸ್ಪರ್ಧಿಯು ಯೋಗ ಮ್ಯಾಟ್ ಅನ್ನು ಒಯ್ಯಬೇಕು 
  6. ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಗುರುತಿಸಬೇಕು
  7. ಸ್ಪರ್ಧಿಗಳನ್ನು ಎಣಿಸಲು/ಸ್ಕ್ಯಾನಿಂಗ್ ಮಾಡಲು ಅನುಕೂಲವಾಗುವಂತೆ ಪ್ರವೇಶ ಪಥಗಳನ್ನು ಖಚಿತಪಡಿಸಿಕೊಳ್ಳುವುದು
  8. ರಿಬ್ಬನ್‌ಗಳು ಅಥವಾ ಟೇಪ್‌ಗಳ ಸಹಾಯದಿಂದ 50/100/200 ಸ್ಪರ್ಧಿಗಳಿಗೆ ಸರಿಹೊಂದುವಂತೆ ಭಾಗವಹಿಸುವ ಪ್ರದೇಶವನ್ನು ಬಾಕ್ಸ್‌ಗಳಂತೆ ಸ್ಪಷ್ಟವಾಗಿ ಗುರುತಿಸುವುದು. ಇದರಿಂದ ಸಾಕ್ಷಿಯು ಮತ್ತು ಮೇಲ್ವಿಚಾರಕರು ತಮ್ಮ ಸ್ಪರ್ಧಿಗಳ ಗುಂಪನ್ನು ಪರಿವೀಕ್ಷಣೆ ಮತ್ತು ವೀಕ್ಷಣೆ ಮಾಡಲು ಸಾಧ್ಯವಿದೆ.
  9. ವೀಡಿಯೊಗ್ರಫಿ ಮತ್ತು ಛಾಯಾಗ್ರಹಣ
  10. ಡ್ರೋನ್‌ಗೆ ಅನುಮತಿ ನೀಡುವುದು.
  11. ಪವರ್ ಸಪ್ಲೈ ಮತ್ತು ಸೌಂಡ್ ಸಿಸ್ಟಮ್
  12. ಕುಡಿಯುವ ನೀರು 
  13. ಸಾರ್ವಜನಿಕ ಶೌಚಾಲಯಗಳು (ಸಾಧ್ಯವಾದರೆ ಕಡ್ಡಾಯವಲ್ಲ) 
  14. ತುರ್ತು ಸೇವೆಗಳು (ಆಂಬ್ಯುಲೆನ್ಸ್)
  15. ವಾಹನ ನಿಲುಗಡೆ
  16. ಸಾರಿಗೆ ವ್ಯವಸ್ಥೆಗಳು
  17. ಲೈವ್ ಸ್ಟ್ರೀಮಿಂಗ್‌ಗಾಗಿ ತಂತ್ರಜ್ಞಾನದ ಅವಶ್ಯಕತೆಗಳು 
  18. ತ್ಯಾಜ್ಯ ನಿರ್ವಹಣೆ
  19. ಭದ್ರತೆ